ಹೊಸಪೇಟೆಯಲ್ಲಿ ನಿರಂತರ ಜಿಟಿ ಜಿಟಿ ಮಳೆ - Hospet of Bellary District
ಹೊಸಪೇಟೆ: ತಾಲೂಕಿನಲ್ಲಿ ರಾತ್ರಿಯಿಂದ ಬೆಳಗ್ಗೆವರೆಗೂ ಜಿಟಿ ಜಿಟಿ ಮಳೆಯಾಗಿದೆ. 6 ತಾಸಿನಿಂದ ಸುರಿದ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ರಸ್ತೆಗಳಲ್ಲಿ ನೀರು ನಿಂತಿದೆ. ತಡರಾತ್ರಿಯಿಂದ ಶುರುವಾದ ಮಳೆ ಬೆಳಗಾದ್ರೂ ಸುರಿಯುತ್ತಿದೆ. ಮಳೆಯಿಂದ ನಗರದ ಹಲವು ಭಾಗದಲ್ಲಿ ಜನ ಸಂಚಾರ ಸಹ ವಿರಳವಾಗಿದೆ.