ಭೀಮಣ್ಣ ನಾಯ್ಕ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸೋದೇ ಸಾಧನೆ, ಗೆಲ್ಲೋದಲ್ಲ: ಹೆಬ್ಬಾರ್ ಕಿಡಿ - latest shivram hebbar news
ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಚುನಾವಣೆ ನಿಲ್ಲೋದೊಂದೇ ಸಾಧನೆ ಹೊರತು ಗೆಲುವು ಅವರ ಗುರಿಯಲ್ಲ. ಅಲ್ಲದೇ ಜಿಲ್ಲೆಯೊಳಗಿನ ಕ್ಷೇತ್ರದಿಂದ ಕ್ಷೇತ್ರಕ್ಕೆ ಅವರ ಪಕ್ಷ ಕೂಡ ಬೇರೆಯಾಗುತ್ತೆ ಎಂದು ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಯಲ್ಲಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ವಿರುದ್ಧ ಕಿಡಿಕಾರಿದ್ದಾರೆ. ಭೀಮಣ್ಣ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ನಂತರ ಜಿಲ್ಲೆಯಲ್ಲಿ ಎಷ್ಟು ಚುನಾವಣೆಗಳಾಗಿವೆ, ಅದರಲ್ಲಿ ಅವರು ಎಷ್ಟು ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮತ ಹಾಕಿದ್ದಾರೆಂದು ಪ್ರಶ್ನಿಸಿದರು. ಜಿಲ್ಲೆಯಲ್ಲಿ ಯಾವುದೇ ಚುನಾವಣೆಯಾದರೂ ಅಭ್ಯರ್ಥಿಯಾಗಿ ಮೊದಲ ಅರ್ಜಿ ಜಿಲ್ಲಾಧ್ಯಕ್ಷರದ್ದೇ ಇರುತ್ತದೆ. ಅವರಿಗೆ ಚುನಾವಣೆ ಸ್ಪರ್ಧಿಸೋದೆ ಸಾಧನೆಯಾಗಿದೆ, ಇನ್ನೂ ಅವರ ಕಾರಲ್ಲಿ ಮೂರೂ ಪಕ್ಷಗಳ ಬಾವುಟ ಇರುತ್ತೆ. ಇಂಥಹ ಜಿಲ್ಲಾಧ್ಯಕ್ಷರನ್ನ ಇಟ್ಟುಕೊಂಡಿರೋದೇ ದುರಂತವಾಗಿದೆ. ಇವರೇ ಮುಂದುವರಿದಲ್ಲಿ ಕಾಂಗ್ರೆಸ್ ಅಧೋಗತಿಗೆ ಹೋಗುತ್ತದೆಯೆಂದು ಕುಟುಕಿದರು.