ಮೋದಿ ಸಾಧನೆಗಳನ್ನು ನೋಡಿ ನನಗೆ ಮತ ನೀಡಿ : ಅಣ್ಣಾಸಾಹೇಬ್ ಜೊಲ್ಲೆ - ನೀರಾವರಿ ವ್ಯವಸ್ಥೆ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಳೆದ ಐದು ವರ್ಷಗಳ ಸಾಧನೆ ನೋಡಿ ಬಿಜೆಪಿಗೆ ಮತ ನೀಡಿ ಎಂದು ಚಿಕ್ಕೋಡಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ಹೇಳಿದರು. ಪ್ರಚಾರಾರ್ಥವಾಗಿ ಕಾಗವಾಡ ತಾಲೂಕಿಗೆ ಆಗಮಿಸಿದಾಗ ಈಟಿವಿ ಭಾರತ ಜೊತೆ ಮಾತನಾಡಿದ ಅವರು, ಚಿಕ್ಕೋಡಿ ಭಾಗದಲ್ಲಿ ಸೂಕ್ತ ನೀರಾವರಿ ವ್ಯವಸ್ಥೆ ಜಾರಿಗೆ ತರಲು ಪಣ ತೊಟ್ಟಿದ್ದೇನೆ. ಕೇಂದ್ರದ ಎಲ್ಲ ಸೌಲಭ್ಯಗಳನ್ನು ಜಾರಿಗೆ ತಂದು ಜನರ ಸೇವೆ ಮಾಡುತ್ತೇನೆ.ಚಿಕ್ಕೋಡಿ ಪ್ರತ್ಯೇಕ ರಾಜ್ಯಕ್ಕೆ ನಾನು ಬೆಂಬಲ ಸೂಚಿಸುತ್ತೇನೆ ಎಂದರು