ಸ್ಮಶಾನಕ್ಕಿಲ್ಲ ಜಾಗ: ಭೂಮಿಗೆ ಸ್ಥಳ ನೀಡುವಂತೆ ಗ್ರಾಮಸ್ಥರ ಪ್ರತಿಭಟನೆ - ಕಲಬುರಗಿ ಪ್ರತಿಭಟನೆ ಸುದ್ದಿ
ಕಲಬುರಗಿ : ಸ್ಮಶಾನ ಭೂಮಿಗೆ ಸ್ಥಳ ನೀಡುವಂತೆ ಆಗ್ರಹಿಸಿ ಕಲಬುರಗಿಯ ನಂದಿಕೂರ ಗ್ರಾಮಸ್ಥರು ಅಣಕು ಶವಯಾತ್ರೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಸ್ಮಶಾನ ಭೂಮಿ ಸ್ಥಳ ನಿಯೋಜಿಸುವಂತೆ ಹಲವು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಾ ಬಂದರೂ ಯಾವುದೇ ಪ್ರಯೋಜನ ವಾಗಿಲ್ಲ. ಜನಪ್ರತಿನಿಧಿಗಳಿಗೆ ನದಿಂಕೂರ ಗ್ರಾಮಸ್ಥರ ಗೋಳು ಕೇಳುತ್ತಿಲ್ಲ ಎಂದು ಆರೋಪಿಸಿದರು. ಸರ್ಕಾರ ಕೂಡಲೇ ಸ್ಮಶಾನ ಭೂಮಿ ಸ್ಥಳ ನಿಯೋಜಿಸುವಂತೆ ಒತ್ತಾಯಿಸಿದರು.