ಸ್ಫೋಟಕ ಇದ್ದ ಬೆದರಿಕೆ ಪತ್ರ ಕಳಿಸಿದ ಪ್ರಕರಣ: ತನಿಖೆಗೆ 3 ತಂಡ ರಚನೆ - ಸ್ಫೋಟಕ ಇದ್ದ ಬೆದರಿಕೆ ಪತ್ರ ಪೋಸ್ಟ್ ಪ್ರಕರಣದ ತನಿಖೆ
ಬೆಂಗಳೂರು: ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರಿಗೆ ಡಿಟೋನೇಟರ್ ಪೋಸ್ಟ್ ಮಾಡಿ ಬೆದರಿಕೆ ಪತ್ರ ಬರೆದ ಪ್ರಕರಣ ಸಂಬಂಧ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರತಿಕ್ರಿಯೆ ನೀಡಿದ್ದಾರೆ. ಸಿಟಿ ಸಿವಿಲ್ ಎನ್ಡಿಪಿಎಸ್ ನ್ಯಾಯಾಲಯಕ್ಕೆ ಬಂದ ಅನಾಮಧೇಯ ಪತ್ರದ ಜೊತೆ ಸಣ್ಣ ಪ್ಯಾಕೇಟ್ ಕೂಡ ಇತ್ತು. ಸಿಸಿಬಿ ಪೊಲೀಸರು ಈ ಬಗ್ಗೆ ತನಿಖೆಯನ್ನ ಮುಂದುವರೆಸಿದ್ದಾರೆ. ಈಗಾಗಲೇ ಪ್ರಕರಣದ ತನಿಖೆಗೆ ಮೂರು ತಂಡ ರಚಿಸಲಾಗಿದೆ. ನಿನ್ನೆ ರಾತ್ರಿಯಿಂದಲೇ ಕಾರ್ಯಾಚರಣೆ ಆರಂಭವಾಗಿದೆ. ಕೋರ್ಟ್ ಸುತ್ತ ಬಿಗಿ ಭದ್ರತೆ ವಹಿಸಲಾಗಿದೆ. ಆರೋಪಿಗಳು ಯಾರೇ ಆಗಿರಲಿ ಅವರನ್ನ ವಶಕ್ಕೆ ಪಡೆಯಲಾಗುವುದು ಎಂದು ಸ್ಪಷ್ಟಪಡಿಸಿದರು.