ಮೈದುಂಬಿ ಹರಿಯುತ್ತಿದೆ ಐತಿಹಾಸಿಕ ಮದಗ ಮಾಸೂರು ಕೆರೆ: ವಿಡಿಯೋ - Haveri
ಹಾವೇರಿ: ಜಿಲ್ಲಾದ್ಯಂತ ವ್ಯಾಪಕವಾಗಿ ಮಳೆಯಾಗುತ್ತಿದ್ದು, ನದಿಗಳು ಮೈದುಂಬಿ ಹರಿಯುತ್ತಿವೆ. ಇನ್ನು ರಟ್ಟಿಹಳ್ಳಿ ತಾಲೂಕಿನ ಐತಿಹಾಸಿಕ ಮದಗ ಮಾಸೂರು ಕೆರೆ ತುಂಬಿದ್ದು, ಕೋಡಿ ಬೀಳುವ ಪ್ರದೇಶದಲ್ಲಿ ಸಣ್ಣ ಜಲಪಾತವೇ ನಿರ್ಮಾಣವಾಗಿದೆ. ಕೋಡಿಯಿಂದ ನಿರ್ಮಾಣವಾಗುವ ಜಲಪಾತದ ದೃಶ್ಯ ನೋಡುಗರಿಗೆ ರೋಮಾಂಚನ ಉಂಟುಮಾಡುತ್ತಿದೆ. ಇಲ್ಲಿಂದ ನೀರು ಕುಮದ್ವತಿ ನದಿಗೆ ಸೇರುವ ಕಾರಣ ಕುಮದ್ವತಿ ನದಿ ಮೈದುಂಬಿ ಹರಿಯಲಾರಂಭಿಸಿದೆ.