ಉತ್ತಮ ಆರೋಗ್ಯದ ಮಹತ್ವ ಸಾರಲು ಹುಬ್ಬಳ್ಳಿಯಲ್ಲಿ ನಡೀತು ಆರೋಗ್ಯ ಸಪ್ತಾಹ - ಆರೋಗ್ಯಯುಕ್ತ ಆಹಾರ
ಇತ್ತೀಚಿನ ದಿನಗಳಲ್ಲಿ ಜನರು ಪೌಷ್ಟಿಕಾಂಶ ಆಹಾರದ ಕಡೆ ಹೆಚ್ಚು ಗಮನ ಕೊಡದೆ, ನಾಲಿಗೆ ಚಪಲಕ್ಕಾಗಿ ಫಾಸ್ಟ್ ಫುಡ್ಗಳ ಮೊರೆ ಹೋಗ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಉತ್ತಮ ಆರೋಗ್ಯದ ಮಹತ್ವ ಸಾರಲು ಆಹಾರ ಸಪ್ತಾಹ ಏರ್ಪಡಿಸಲಾಗಿತ್ತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ವಿವಿಧ ರೀತಿಯ ಆರೋಗ್ಯಯುಕ್ತ ಆಹಾರ ಪ್ರದರ್ಶಿಸಿ ಜನರಿಗೆ ಮಾಹಿತಿ ನೀಡಿದ್ರು.