ಶಿಕಾರಿಪುರದಲ್ಲಿ ನಡೆಯಿತು ವಿಶೇಷ ನಾಗರ ಪಂಚಮಿ...!
ಶಿವಮೊಗ್ಗ : ಇಂದು ನಾಡಿನೆಲ್ಲೆಡೆ ನಾಗರ ಪಂಚಮಿ ಹಬ್ಬದ ಸಡಗರ ಜೋರಾಗಿಯೇ ನಡೆದಿತ್ತು. ಹಾಗೆಯೇ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಿಹಳ್ಳಿ ತಾಂಡಾದಲ್ಲಿ ಹುತ್ತಕ್ಕೆ ಹಾಲು ಹಾಕುವ ಮೂಲಕ ನಾಗರ ಪಂಚಮಿ ಹಬ್ಬವನ್ನ ಆಚರಿಸಲಾಯಿತು. ನಾಗರ ಪಂಚಮಿ ಹಬ್ಬಕ್ಕೆ ಈ ಹಳ್ಳಿಗರು ವಿಶೇಷ ವಾಗಿ ಅಡುಗೆ ತಯಾರಿಸುತ್ತಾರೆ. ಉಂಡೆ, ಸಿಹಿ ತಿನಿಸುಗಳನ್ನ ಮಾಡಿ ಹುತ್ತಕ್ಕೆ ಪೂಜೆ ಸಲ್ಲಿಸುವ ಮೂಲಕ ನಾಗರ ಪಂಚಮಿಯನ್ನ ಆಚರಿಸುತ್ತಾರೆ. ವಿಶೇಷ ಎಂದರೆ ಹಳ್ಳಿಯಲ್ಲಿ ಯುವಕರು ಎಲ್ಲಾ ಸೇರಿ ಹುತ್ತಕ್ಕೆ ಪೂಜೆ ಮಾಡಿ ಹಾಲು ಹಾಕುತ್ತಾರೆ.