ಸ್ವಯಂ ಪ್ರೇರಿತರಾಗಿ ಒಂದು ವಾರ ಅಥಣಿ ಬಂದ್ ಮಾಡಿ: ಜನತೆಗೆ ಶಾಸಕ ಕುಮಟಳ್ಳಿ ಮನವಿ - Belagavi news
ಬೆಳಗಾವಿ: ಇಲ್ಲಿನ ಅಥಣಿ ತಾಲೂಕಿನಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದ್ದು, ಈ ಹಿನ್ನೆಲೆ ಶಾಸಕ ಮಹೇಶ್ ಕುಮಟಳ್ಳಿ ಒಂದು ವಾರಗಳ ಕಾಲ ಸ್ವಯಂ ಪ್ರೇರಿತರಾಗಿ ವ್ಯಾಪಾರ ವಹಿವಾಟು ಬಂದ್ ಮಾಡುವಂತೆ ಮನವಿ ಮಾಡಿದ್ದಾರೆ. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವುದೇ ಕೊರೊನಾಗೆ ರಾಮಬಾಣ, ಅಲ್ಲದೆ ಕೊರೊನಾ ಹರಡದಂತೆ ತಡೆಯಲು ಸ್ವಯುಂ ಪ್ರೇರಿತ ಬಂದ್ ವಾತಾವರಣ ನಿರ್ಮಾಣವಾಗಬೇಕಿದೆ ಎಂದಿದ್ದಾರೆ.