ಸಿಎಂ ಯಡಿಯೂರಪ್ಪ ಆದಷ್ಟು ಬೇಗ ಗುಣಮುಖರಾಗಲಿ: ಕೆ.ಎಸ್.ಈಶ್ವರಪ್ಪ ಹಾರೈಕೆ - ಸಿಎಂ ಯಡಿಯೂರಪ್ಪನವರಿಗೆ ಎರಡನೇ ಭಾರಿ ಕೊರೊನಾ
ಶಿವಮೊಗ್ಗ: ಸಿಎಂ ಯಡಿಯೂರಪ್ಪನವರಿಗೆ ಎರಡನೇ ಭಾರಿ ಕೊರೊನಾ ಪಾಸಿಟಿವ್ ಬಂದಿರುವುದು ನಿಜಕ್ಕೂ ಆಘಾತದ ಸಂಗತಿ. ಅವರು ಆದಷ್ಟು ಬೇಗ ಗುಣಮುಖರಾಗಿ ನಾಡಿನ ಸೇವೆಗೆ ಬರಲಿ ಎಂದು ಪ್ರಾರ್ಥಿಸುವುದಾಗಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ಭದ್ರಾವತಿ ಹಾಗೂ ತೀರ್ಥಹಳ್ಳಿಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸಿದೆ. ಎರಡು ಕಡೆ ಉತ್ತಮ ಅಭ್ಯರ್ಥಿಗಳನ್ನೇ ಹಾಕಲಾಗಿದೆ. ಗೆಲ್ಲುವ ನಿಟ್ಟಿನಲ್ಲಿ ಬಿಜೆಪಿ ಯತ್ನ ನಡೆಸುತ್ತದೆ ಎಂದರು.