ಮಲಪ್ರಭಾ ನದಿ ಪ್ರವಾಹ: ಬಾಗಲಕೋಟೆ-ಹುಬ್ಬಳ್ಳಿ ಸಂಚಾರ ಸ್ಥಗಿತ - Bagalkot - Hubli Traffic Disruption update
ಬಾಗಲಕೋಟೆ: ಮಲಪ್ರಭಾ ನದಿ ಪ್ರವಾಹದಿಂದಾಗಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚೊಳ್ಳಚಗುಡ್ಡ ಬಳಿ ಇರುವ ಸೇತುವೆ ಮುಳುಗಡೆ ಆಗಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಗದಗ-ಬಾದಾಮಿ ಮಾರ್ಗದ ರಸ್ತೆ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಗಿದೆ. ಕೊಣ್ಣೂರ ಸೇತುವೆಯೂ ಜಲಾವೃತಗೊಂಡ ಪರಿಣಾಮ ಬಾಗಲಕೋಟೆ-ಹುಬ್ಬಳ್ಳಿ ಮಾರ್ಗ ಸ್ಥಗಿತಗೊಂಡಿದೆ. ಇದರಿಂದ ವಿಜಯಪುರ-ಬಾಗಲಕೋಟೆಯಿಂದ ಹುಬ್ಬಳ್ಳಿಗೆ ಸಂಚಾರ ಮಾರ್ಗ ಬಂದ್ ಆಗಿದೆ. ಹೀಗಾಗಿ ಬಾಗಲಕೋಟೆ ಜನತೆ ಹುಬ್ಬಳ್ಳಿ ಹಾಗೂ ಗದಗಕ್ಕೆ ಸಂಚರಿಸಲು ಪರದಾಡುತ್ತಿದ್ದಾರೆ.