ಮದ್ದೂರಮ್ಮನ ಜಾತ್ರೆಯಲ್ಲಿ ಗಮನ ಸೆಳೆಯುತ್ತಿವೆ ರಾಸುಗಳು - ರಾಶುಗಳ ಜಾತ್ರೆ
ಮಂಡ್ಯ ಜಿಲ್ಲೆಯಾದ್ಯಂತ ಚುನಾವಣಾ ಜಾತ್ರೆ ನಂತರ ಗ್ರಾಮ ದೇವರುಗಳ ಜಾತ್ರೆ ಅದ್ದೂರಿಯಾಗಿ ನಡೆಯುತ್ತಿವೆ. ಮದ್ದೂರಿನ ಅದಿ ದೇವತೆ ಮದ್ದೂರಮ್ಮ ಕೊಂಡೋತ್ಸವ ಇಂದು ಬೆಳಗ್ಗೆ ಸಂಭ್ರಮದಿಂದ ಜರುಗಿತು. ಮದ್ದೂರು ಪಟ್ಟಣದಲ್ಲಿ ನಡೆದ ಕೊಂಡೋತ್ಸವನ್ನು ಭಕ್ತರು ಕಣ್ತುಂಬಿಕೊಂಡರು. ಜತೆಗೆ ಮದ್ದೂರಮ್ಮನ ಹಬ್ಬದ ಪ್ರಯುಕ್ತ ದನಗಳ ಜಾತ್ರೆಯೂ ನಡೆಯುತ್ತಿದೆ. ಕಳೆದ ಬಾರಿಗಿಂತ ಈ ಬಾರಿ ರಾಜ್ಯದ ನಾನಾ ಭಾಗಗಳಿಂದ ರಾಸುಗಳನ್ನು ತಂದು ರೈತರು ಮಾರಾಟ ಮಾಡುತ್ತಿದ್ದಾರೆ.