ಕಾರವಾರದಲ್ಲಿ ಲೈವ್ ಮರ್ಡರ್: ಕೊಲೆ ನಡೆದ ಗಂಟೆಯೊಳಗೆ ಆರೋಪಿ ಅರೆಸ್ಟ್ - ಕಾರವಾರ ಅಪರಾಧ ಸುದ್ದಿ
ಕಾರವಾರ: ಒಂದು ಕ್ಷಣದ ಕೋಪ ಏನನ್ನು ಬೇಕಾದರೂ ಮಾಡಿ ಬಿಡುತ್ತದೆ ಎನ್ನುವ ಮಾತನ್ನು ಕೇಳಿದ್ದೇವೆ. ಇಲ್ಲೊಂದು ಊರಿನಲ್ಲೂ ಆಗಿದ್ದು ಅಷ್ಟೇ. ಅಕ್ಕಪಕ್ಕದ ಮನೆಯವರ ನಡುವೆ ಕೆಲ ದಿನಗಳಿಂದ ಜಗಳ ನಡೆಯುತ್ತಿತ್ತು. ಇವತ್ತು ಮನೆಯ ಇಬ್ಬರು ಪುರುಷರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಪ್ರಾರಂಭವಾಗಿದೆ. ಇಬ್ಬರಲ್ಲಿ ಒಬ್ಬರು ಸುಮ್ಮನಾಗಿದ್ದರೆ ಒಂದು ಜೀವ ಉಳಿಯುತ್ತಿತ್ತೇನೋ. ಆದರೆ ಕ್ಷಣಮಾತ್ರದ ಸಿಟ್ಟು ಒಂದು ಜೀವವನ್ನೇ ತೆಗೆದಿದೆ. ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ ನೋಡಿ.