ಶಾಸಕ ಕಂಪ್ಲಿ ಗಣೇಶ-ಮಾಜಿ ಸಚಿವ ಸಂತೋಷ ಲಾಡ್ ಕಬಡ್ಡಿ ಕಬಡ್ಡಿ - Former Minister santhosh Laud
ಬಳ್ಳಾರಿ: ತಾಲೂಕಿನ ಎರ್ರಂಗಳಿ ಗ್ರಾಮದಲ್ಲಿ ಶನಿವಾರ ನಡೆದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಮಾಜಿ ಸಚಿವ ಸಂತೋಷ ಲಾಡ್ ಹಾಗೂ ಕಂಪ್ಲಿ ಶಾಸಕ ಜೆ.ಎನ್.ಗಣೇಶ ಕಬಡ್ಡಿ ಆಡುವುದರ ಮೂಲಕ ಆಟಕ್ಕೆ ಚಾಲನೆ ನೀಡಿದರು. ಕಂಪ್ಲಿ ಗಣೇಶ್ ಅವರು ಕಬಡ್ಡಿ ಕಬಡ್ಡಿ ಅಂತಾ ರೈಡ್ ಮಾಡಿದ್ರೆ, ಇತ್ತ ಮಾಜಿ ಸಚಿವ ಸಂತೋಷ ಲಾಡ್ ಅಖಾಡದಲ್ಲಿ ನಿಂತು ಗಣೇಶ್ ಅವರನ್ನು ಹಿಡಿಯಲು ಹರಸಾಹಸ ನಡೆಸಿದ್ರು. ಆಟದಲ್ಲಿ ಈ ಇಬ್ಬರು ಪಾಲ್ಗೊಂಡಿದ್ದರು ಅಭಿಮಾನಿಗಳು, ಶಿಳ್ಳೆ, ಕೇಕೆ ಹಾಕಿ ಸಂಭ್ರಮಿಸಿದರು.