ಶೂಟ್ ಮಾಡ್ಬಿಡಿ, ಕ್ರೀಡೆಯಲ್ಲಿರುವ ಮಕ್ಕಳನ್ನೇ ನೇಮಿಸಿಕೊಳ್ಳಿ.. ಅತ್ಯಾಚಾರ ನನ್ ಮಕ್ಕಳು ಮಾಡಿದರೂ ಅದು ನೀಚತನವೇ.. - Veena acchayya talk about women safety
ರೈಫಲ್ ಶೂಟಿಂಗ್‌ನಲ್ಲಿ ಸಾಕಷ್ಟು ಮಕ್ಕಳು ಪರಿಣಿತರಿದಾರೆ. ಇಂಥಾ ಶೂಟರ್‌ಗಳನ್ನ ಪೊಲೀಸ್ ಇಲಾಖೆಯಲ್ಲಿ ನೇಮಕ ಮಾಡಿಕೊಳ್ಳಬೇಕು. ಅತ್ಯಾಚಾರಿಗಳ ವಿರುದ್ಧ ಕ್ರೀಡಾ ಇಲಾಖೆಯ ಶೂಟರ್‌ಗಳನ್ನ ಬಳಸಿಕೊಳ್ಳಬೇಕು ಅಂತಾ ಬಿಜೆಪಿ ಸದಸ್ಯೆ ತೇಜಸ್ವಿನಿ ಶ್ರೀರಮೇಶ್ ಒತ್ತಾಯಿಸಿದರು. ವ್ಯಕ್ತಿತ್ವದಿಂದ ಯಾರು ಸುಂದರವಾಗಿರುತ್ತಾರೆಯೋ ಅವರೇ ಸೌಂದರ್ಯವುಳ್ಳ ವ್ಯಕ್ತಿ. ಈ ಬಗ್ಗೆ ಶಿಕ್ಷಣ ನೀಡಬೇಕು ಅಂತಾ ಬಿಜೆಪಿಯ ಸದಸ್ಯೆ ಭಾರತಿ ಶೆಟ್ಟಿ ಹೇಳಿದರು. ಕಾಂಗ್ರೆಸ್ ಸದಸ್ಯೆ ವೀಣಾ ಅಚ್ಚಯ್ಯ ಕೂಡ ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪರಿಷತ್‌ನಲ್ಲಿ ಈ ಮೂವರು ನಾರಿಮಣಿಗಳು ಅತ್ಯಾಚಾರ ಪ್ರಕರಣಗಳ ಹೆಚ್ಚಳದ ವಿರುದ್ಧ ಆರ್ಭಟಿಸಿದರು..