ಕರ್ನಾಟಕ

karnataka

ETV Bharat / videos

ಸುರಕ್ಷತೆ ಬಗ್ಗೆ ನಿರ್ಲಕ್ಷ್ಯ: ಸಿಡಿದೆದ್ದ ಕಾರ್ಮಿಕರಿಂದ ಕಂಪನಿ ವಿರುದ್ದ ಪ್ರತಿಭಟನೆ - Kolar District Narasapur Industrial Area

By

Published : Aug 27, 2019, 12:01 AM IST

ಕೋಲಾರ: ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ನಹಾರ್ಸ್​ ಎಂಜಿನಿಯರಿಂಗ್​ ಇಂಡಿಯಾ ಪ್ರೈವೇಟ್ ಲಿಮಿಟೆಡ್​ ಕಂಪನಿಯಲ್ಲಿ ಕೆಲಸ ಮಾಡುವ ವೇಳೆ ಯಂತ್ರಕ್ಕೆ ಸಿಲುಕಿ ಕಾರ್ಮಿಕನೋರ್ವನ ಎರಡೂ ಕೈಗಳು ನಜ್ಜುಗುಜ್ಜಾಗಿದ್ದು, ಆತ ಸದ್ಯ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈವರೆಗೆ ಕಂಪನಿಯಲ್ಲಿ ಸುಮಾರು ಐದು ಜನ ಕಾರ್ಮಿಕರಿಗೆ ಕೆಲಸದ ವೇಳೆ ಇದೇ ರೀತಿ ಕೈ ಬೆರಳುಗಳು ತುಂಡಾಗಿದ್ದು, ಕಂಪನಿಯಿಂದ ಗಾಯಗೊಂಡ ಕಾರ್ಮಿಕರಿಗೆ ಸರಿಯಾದ ಪರಿಹಾರ ನೀಡಿಲ್ಲ. ಅಲ್ಲದೆ ಕೆಲಸ ಮಾಡುವ ವೇಳೆ ಕಂಪನಿ ಕಾರ್ಮಿಕರಿಗೆ ಯಾವುದೇ ಸುರಕ್ಷತಾ ಉಪಕರಣಗಳನ್ನು ನೀಡೋದಿಲ್ಲ, ಎಂಬುವುದ ಕಾರ್ಮಿಕರ ಆರೋಪ. ಈ ನಿಟ್ಟಿನಲ್ಲಿ ನೂರಾರು ಕಾರ್ಮಿಕರು ನೆಹಾರ್ಸ್​ ಕಂಪನಿ ಎದುರು ಜಮಾಯಿಸಿ ಕಂಪನಿ ವಿರುದ್ದ ಪ್ರತಿಭಟನೆ ಮಾಡಿದರು.

ABOUT THE AUTHOR

...view details