ಕನ್ನಡಾಭಿಮಾನಿಗಳ ಮುಖದಲ್ಲಿ ರಾರಾಜಿಸಿದ ಕನ್ನಡಮ್ಮನ ಧ್ವಜ - ಕಲಬುರಗಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ಕಲಬುರಗಿಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ್ದ ವಿವಿಧ ಭಾಗದ ಕನ್ನಡಾಭಿಮಾನಿಗಳ ಮುಖದ ಮೇಲೆ ಕನ್ನಡ ಬಾವುಟವು ರಾರಾಜಿಸಿತು. ಹಿರಿಯರಿಂದ ಕಿರಿಯರೆಲ್ಲರೂ ಮುಖಕ್ಕೆ ಕೆಂಪು, ಹಳದಿ ಬಣ್ಣಗಳಲ್ಲಿ ಬಾವುಟ ಹಾಗೂ ನೆಚ್ಚಿನ ನಟರ ಹೆಸರುಗಳನ್ನು ಬರೆಯಿಸಿಕೊಂಡು ಅಭಿಮಾನ ಮೆರೆದರು.