ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕರ್ತರ ಜೊತೆ ಮಾತನಾಡಿದ ಜೆ ಪಿ ನಡ್ಡಾ - vijyapura news
ವಿಜಯಪುರ : ಕರ್ನಾಟಕ ಜನಸಂವಾದ ರ್ಯಾಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕರ್ತರ ಜೊತೆ ಮಾತನಾಡಿದರು. ವಿಜಯಪುರ ನಗರದ ಶ್ಯಾಮ್ಸ್ ಸ್ಕೂಲ್ನಲ್ಲಿ ಪರದೆ ಅಳವಡಿಸಿ ಜೆ ಪಿ ನಡ್ಡಾ ಅವರ ಭಾಷಣವನ್ನ ನೇರಪ್ರಸಾರ ಮಾಡಲಾಯಿತು. ಸಂವಾದದಲ್ಲಿ ಸ್ವದೇಶಿ ವಸ್ತು ಬಳಸಲು ಬಿಜೆಪಿ ಕಾರ್ಯಕರ್ತರಿಗೆ ಜೆ ಪಿ ನಡ್ಡಾ ಸಲಹೆ ನೀಡಿದರು. ವಿಡಿಯೋ ಕಾನ್ಫರೆನ್ಸ್ ವೀಕ್ಷಿಸಲು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ, ಬಿಜೆಪಿ ಜಿಲ್ಲಾಧ್ಯಕ್ಷ ಆರ್ ಎಸ್ ಪಾಟೀಲ ಕೊಚಬಾಳ, ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ, ವಿಜುಗೌಡ ಪಾಟೀಲ ಆಗಮಿಸಿದ್ದರು.