ಕೇಂದ್ರಾಡಳಿತ ಮಲಗಿದೆ, ಆರ್ಥಿಕ ಪರಿಸ್ಥಿತಿ ಐಸಿಯು ನಲ್ಲಿದೆ: ಐವನ್ ಡಿಸೋಜ ವ್ಯಂಗ್ಯ - ಪ್ರಧಾನಮಂತ್ರಿ
ಬಿಜೆಪಿ ಸರ್ಕಾರ ನಾಗಪುರದ ಪ್ರಚಾರಕರ ಮಾತು ಕೇಳಿ ದೇಶ ನಡೆಸುತ್ತಿದ್ದು, ಅದರಿಂದ ಈ ಆರ್ಥಿಕ ದುಸ್ಥಿತಿ ನಿರ್ಮಾಣವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆರೋಪಿಸಿದ್ದಾರೆ. ನಾಗಪುರದಲ್ಲಿ ಮನಮೋಹನ್ ಸಿಂಗ್ ಅವರಂತಹ ಅರ್ಥ ಶಾಸ್ತ್ರಜ್ಞರು, ಚಿಂತಕರು ಇಲ್ಲ. ಅಲ್ಲಿ ಪ್ರಚಾರಕರು ಮಾತ್ರ ಇರುವುದು. ದೇಶದ ಪ್ರಧಾನಮಂತ್ರಿಗೆ ವಿದೇಶ ಸುತ್ತುವುದನ್ನು ಬಿಟ್ಟರೆ ಬೇರೆಯದ್ದಕ್ಕೆ ಸಮಯ ಇಲ್ಲ. ಹಾಗಾಗಿ ಕೇಂದ್ರಾಡಳಿತ ಮಲಗಿದೆ. ಆರ್ಥಿಕ ಪರಿಸ್ಥಿತಿ ಐಸಿಯುನಲ್ಲಿದೆ ಎಂದು ಐವನ್ ವ್ಯಂಗ್ಯವಾಡಿದ್ದಾರೆ.
Last Updated : Sep 3, 2019, 8:25 PM IST