ಹತ್ತು ಹಲವು ಸಂಕಟಗಳ ಜೊತೆ ಬಿಎಸ್ವೈಗೆ ಎದುರಾಯಿತು ಇನ್ನೊಂದು ಹೊಸ ಸವಾಲು... - ಚಾಮರಾಜನಗರಕ್ಕೆ ಭೇಟಿ ನೀಡದ ಮುಖ್ಯಮಂತ್ರಿ ಯಡಿಯೂರಪ್ಪ
ಬೆಂಗಳೂರು: ಅಧಿಕಾರಕ್ಕೆ ಬಂದ ದಿನದಿಂದಲೂ ಒಂದಲ್ಲ ಒಂದು ಸಂಕಟ ಸಂಕಷ್ಟ ಸಂದಿಗ್ಧತೆಯನ್ನು ಎದುರಿಸುತ್ತಲೇ ಬಂದಿರುವ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರಿಂದ ಹೊಸದೊಂದು ಸವಾಲು ಎದುರಾಗಿದೆ. ಸಾಮಾನ್ಯವಾಗಿ ಅಧಿಕಾರಕ್ಕೆ ಬರುವ ಪ್ರತಿಯೊಬ್ಬ ಮುಖ್ಯಮಂತ್ರಿಗೂ ಚಾಮರಾಜನಗರ ಜಿಲ್ಲೆಗೆ ಆಗಮಿಸುವಂತೆ ಸವಾಲು ಹಾಕುವ ವಾಟಾಳ್ ಇದೀಗ ಬಿಎಸ್ವೈ ಸವಾಲು ಹಾಕಿದ್ದು 15 ದಿನಗಳ ಗಡುವು ಕೂಡ ನೀಡಿದ್ದಾರೆ.