ದಸರಾ ಸಂಭ್ರಮಕ್ಕೆ ತಣ್ಣೀರು ಎರಚಿದ ವರುಣ: ಜಲಾವೃತಗೊಂಡ ಗಣಿನಾಡ ಜಂಭುನಾಥ ಹಳ್ಳಿ - ಹೊಸಪೇಟೆ ಮಳೆ ಸುದ್ದಿ
ಗಣಿನಾಡು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಾದ್ಯಂತ ವರುಣನ ಅರ್ಭಟ ಜೋರಾಗಿದ್ದು, ಜಂಭುನಾಥ ಹಳ್ಳಿಯ ಸುಡುಗಾಡು ಸಿದ್ಧರ ಕಾಲೊನಿಯಲ್ಲಿರುವ ಗುಡಿಸಲು, ಮನೆಗಳು ಜಲಾವೃತಗೊಂಡಿವೆ. ದಸರಾ ಹಬ್ಬದ ಸಂಭ್ರಮದಲ್ಲಿ ಇರಬೇಕಾಗಿದ್ದ ಜನರ ಮನೆಗೆ ನುಗ್ಗಿರುವ ಮಳೆ ನೀರನ್ನು ಎತ್ತಿ ಹಾಕುವ ದುಃಸ್ಥಿತಿ ಎದುರಾಗಿದೆ. ಆಯುಧ ಪೂಜೆ ನೆರವೇರಿಸಿ ಸಂಭ್ರದಲ್ಲಿರಬೇಕಿದ್ದ ಜನರಿಗೆ ಸಾಕಪ್ಪಾ ಈ ಮಳೆಯ ಸಹವಾಸ ಎನ್ನುವಂತಾಗಿದೆ. ಮನೆಯ ಮುಂಭಾಗದಲ್ಲೇ ಮಳೆ ನೀರು ನಿಂತಿದ್ದು, ಸಂಚಾರಕ್ಕೂ ಅಡೆತಡೆ ಉಂಟಾಗಿದೆ. ಒಟ್ಟಿನಲ್ಲಿ ಜನರ ಹಬ್ಬದ ಖುಷಿಯನ್ನು ಮಳೆರಾಯ ಕಿತ್ತುಕೊಂಡಿದ್ದಾನೆ