ಎಳ್ಳು, ಬೆಲ್ಲ ಹಂಚಿ ಸಂಕ್ರಾಂತಿ ಆಚರಿಸಿದ ಹಾವೇರಿಯ ಜನತೆ... - ಹಾವೇರಿಯಲ್ಲಿ ಸಂಕ್ರಾತಿ ಆಚರಣೆ
ಹಾವೇರಿ ಜಿಲ್ಲೆಯಾದ್ಯಂತ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ನದಿ ಸಂಗಮ ಸ್ಥಳಗಳಿಗೆ ತೆರಳಿದ ಜನರು ಎಳ್ಳು ಬೆಲ್ಲ ಹಚ್ಚಿಕೊಂಡು ಪುಣ್ಯ ಸ್ನಾನ ಮಾಡಿದರು. ನಂತರ ಗಂಗಾಮಾತೆಗೆ ಪೂಜೆ ಸಲ್ಲಿಸಿದರು. ಜಿಲ್ಲೆಯ ಪ್ರಮುಖ ನದಿ ತಟಗಳಲ್ಲಿ ಮಿಂದೆದ್ದ ಜನತೆ ನಂತರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ತಮ್ಮ ಕುಟುಂಬ ಸಮೇತರಾಗಿ ಸಹಪಂಕ್ತಿಭೋಜನ ಮಾಡಿದರು.