ಹಾಸನದಲ್ಲಿ ಅನಗತ್ಯ ತಿರುಗಾಡುತ್ತಿದ್ದ ವಾಹನಗಳು ಸೀಜ್.. - ಅನಗತ್ಯವಾಗಿ ವಾಹನ ತಿರುಗಾಟ
ಜಿಲ್ಲೆಯಲ್ಲಿ ಕೊರೊನಾ ಭೀತಿಯಿದ್ದರೂ ಅದನ್ನು ಲೆಕ್ಕಿಸದೇ ನಗರದಲ್ಲಿ ಅನಗತ್ಯ ಸಂಚರಿಸುತ್ತಿದ್ದವರ ವಾಹನಗಳನ್ನು ಹಾಸನ ಪೊಲೀಸರು ಸೀಜ್ ಮಾಡಿ ದಂಡ ವಿಧಿಸಿದ್ದಾರೆ. ಅಲ್ಲದೇ ಹೆಲ್ಮೆಟ್ ಧರಿಸದೆ ಓಡಾಡುತ್ತಿದ್ದವರಿಗೂ ದಂಡದ ಬಿಸಿ ಮುಟ್ಟಿಸಿದ್ದಾರೆ. ಕೆಲ ರಸ್ತೆಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡರವರ ನಿರ್ದೇಶನದಂತೆ ಏಕಮುಖ ಸಂಚಾರವನ್ನಾಗಿ ಮಾಡಲಾಗಿದೆ. ಆ ಮೂಲಕ ಸಂಚಾರಕ್ಕೆ ಬ್ರೇಕ್ ಹಾಕಿದ್ದಾರೆ.