ಗುರುಮಠಕಲ್ ಮೋತಕಪಲ್ಲಿಯ ಬಲಭೀಮಸೇನ ದೇಗುಲದಲ್ಲಿ ರಥಸಪ್ತಮಿ ಸಂಭ್ರಮ - ಬಲಭೀಮಸೇನ ದೇಗುಲದಲ್ಲಿ ರಥಸಪ್ತಮಿ ಸಂಭ್ರಮ
ಗುರುಮಠಕಲ್:ಇಲ್ಲಿನ ಮೋತಕಪಲ್ಲಿಯ ಶ್ರೀ ಬಲಭೀಮಸೇನ ದೇವಸ್ಥಾನದಲ್ಲಿ ಸಡಗರ ಸಂಭ್ರಮದಿಂದ ರಥಸಪ್ತಮಿ ಮಹೋತ್ಸವ ನಡೆಸಲಾಯಿತು. ರಾಜ್ಯ ಸೇರಿದಂತೆ ವಿವಿಧ ಭಾಗಗಳಿಂದ ನೂರಾರು ಭಕ್ತರು ರಥ ಸಪ್ತಮಿಯ ದರ್ಶನ ಪಡೆದರು.ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ, ಅಶ್ವ ವಾಹನೋತ್ಸವ,ನವಿಲು ವಾಹನ ಉತ್ಸವ ಹಾಗೂ ವಿವಿಧ ಮಹೋತ್ಸವ ಕಾರ್ಯಕ್ರಮಗಳು ಜರುಗಿದವು.