ಖಂಡ್ರೆ ಪರ ಪ್ರಚಾರಕ್ಕೆ ಬಂದ ನಾಯಕರನ್ನು ದಿಗ್ಭಂಧನಗೊಳಿಸಿ ಪ್ರತಿಭಟಿಸಿದ ಗ್ರಾಮಸ್ಥರು...! - ಪ್ರಚಾರ
ಬೀದರ್ ಲೋಕಸಭೆ ಚುನಾವಣಾ ಹಿನ್ನೆಲೆ ಔರಾದ್ ತಾಲೂಕಿನ ಲಾಧ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಪರ ಪ್ರಚಾರಕ್ಕಾಗಿ ಹೋದ ವಿಧಾನಪರಿಷತ್ ಸದಸ್ಯ ವಿಜಯಸಿಂಗ್, ಭೀಮಸೇನ್ ಸಿಂಧೆ, ಗ್ರಾಮ ಪಂಚಾಯತಿ ಅಧ್ಯಕ್ಷ ಶಿವಾನಂದ ಜಾಬಾ, ಸುಭಾಷ್ ವಿಠ್ಠಲ ನೆಳಗಿ ಅವರು ಬಸವೇಶ್ವರ ದೇವಸ್ಥಾನದಲ್ಲಿ ಚರ್ಚೆ ಮಾಡುವಾಗ ಕೆಲ ಮಹಿಳೆಯರು ನೀರಿಗಾಗಿ ಆಗ್ರಹಿಸಿ ಹೊರಗಿನಿಂದ ಬಾಗಿಲಿಗೆ ಚಿಲಕ ಹಾಕಿ ಎರಡು ಗಂಟೆಗಳ ಕಾಲ ಅವರನ್ನು ಕೂಡಿ ಹಾಕಿ ಪ್ರತಿಭಟನೆ ಮಾಡಿದ್ದಾರೆ. ನಾವು ಕುಡಿವ ನೀರಿಗಾಗಿ ನಿತ್ಯ ಪರದಾಡ್ತಿದ್ದೀವಿ ನಮಗೆ ನೀರು ಕೊಡಿಸಿ ಅಲ್ಲಿಯ ವರೆಗೆ ಬಿಡೋದಿಲ್ಲ ಎಂದು ಚುರುಕು ಮುಟ್ಟಿಸಿದ್ದಾರೆ. ನಂತರ ಗ್ರಾಮದ ಹಿರಿಯರ ಮಧ್ಯಸ್ಥಿಕೆಯಿಂದ ಬಾಗಿಲು ತೆರೆಯಲಾಯಿತು.