ಬಾಗಿಲು ತೆರೆಯದ ದೇಗುಲಗಳು... ನಲುಗಿದ ಪುಷ್ಪೋದ್ಯಮ - flower growers
ತುಮಕೂರು: ಕೊರೊನ ಭೀತಿಯಿಂದ ತುಮಕೂರು ಜಿಲ್ಲೆಯ ಪುಷ್ಪೋದ್ಯಮ ತತ್ತರಿಸಿ ಹೋಗಿದೆ. ಯಾವುದೇ ದೇಗುಲಗಳು ಬಾಗಿಲು ತೆಗೆಯದೇ ಪೂಜೆ-ಪುನಸ್ಕಾರಗಳು ಇಲ್ಲದ ಹಿನ್ನೆಲೆಯಲ್ಲಿ ಹೂಗಳನ್ನು ಖರೀದಿಸಲು ಜನ ಮುಂದೆ ಬರುತ್ತಿಲ್ಲ. ಹೀಗಾಗಿ ಹೂ ಬೆಳೆದರೂ ಕೂಡ ಮಾರುಕಟ್ಟೆ ಇಲ್ಲ. ಈಗಾಗಲೇ ಲಾಕ್ ಡೌನ್ ಸಂದರ್ಭದಲ್ಲಿ ಸಾಕಷ್ಟು ನಷ್ಟ ಅನುಭವಿಸಿರುವ ರೈತರು ಸದ್ಯದ ಮಟ್ಟಿಗೆ ಪುಷ್ಪ ಕೃಷಿಗೆ ಗುಡ್ ಬೈ ಹೇಳಿದ್ದಾರೆ.