ಕೋಳಂಕ್ಕಿ ಗುಡ್ಡಕ್ಕೆ ಬೆಂಕಿ : ಅಪಾರ ಪ್ರಮಾಣದ ಔಷಧೀಯ ಗಿಡಗಳು ಭಸ್ಮ - raichuru news
ರಾಯಚೂರು: ನಗರದ ಹೊರವಲಯದ ಮಲಿಯಾಬಾದ್ ಅರಣ್ಯ ಪ್ರದೇಶದ ಕೋಳಂಕ್ಕಿ ಗುಡ್ಡಕೆ ಬೆಂಕಿ ಬಿದ್ದು ಅಪಾರ ಪ್ರಮಾಣದ ಔಷಧೀಯ ಗಿಡಗಳು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿವೆ. ಮಲಿಯಾಬಾದ್ ಅರಣ್ಯ ಪ್ರದೇಶ ಗುಡ್ಡಗಳಿಂದ ಕೂಡಿದ್ದು, ಅದರಲ್ಲಿ ಕೋಳಕ್ಕಿ ಗುಡ್ಡ ಅನೇಕ ಔಷಧಿ ಸಸ್ಯಗಳನ್ನು ಹೊಂದಿದೆ. ಗುಡ್ಡಕ್ಕೆ ಬೆಂಕಿ ಬಿದ್ದಿರುವ ಹಿಂದೆ ಕಿಡಿಗೇಡಿಗಳ ಕೃತ್ಯ ಇದೆ ಎಂದು ಹತ್ತಿರದ ನಿವಾಸಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.