ಗದ್ದೆಗೆ ಬೆಂಕಿ; ಮೂರೂವರೆ ಎಕರೆ ಕಬ್ಬು ಭಸ್ಮ - ಕಬ್ಬಿನ ಗದ್ದೆಗೆ ಬೆಂಕಿ
ಸವಣೂರು: ಕಬ್ಬಿನ ಗದ್ದೆಗೆ ಬೆಂಕಿ ಹೊತ್ತಿಕೊಂಡು ಕಬ್ಬಿನ ಬೆಳೆ ಸುಟ್ಟು ಕರಕಲಾಗಿರುವ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಲಿವಾಳ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಜಗದೀಶ ಗುರಣ್ಣವರ ಎಂಬ ರೈತ ಮೂರೂವರೆ ಎಕರೆ ಜಮೀನಿನಲ್ಲಿ ಕಬ್ಬು ಬೆಳೆದಿದ್ದ. ಯಾರೋ ದಾರಿಹೋಕರು ಬೀಡಿ ಸೇದಿ ಬೆಂಕಿ ಆರಿಸದೆ ಬಿಸಾಕಿದ್ದರಿಂದ ಕಬ್ಬಿನ ಗದ್ದೆಗೆ ಬೆಂಕಿ ಹೊತ್ತಿಕೊಂಡು ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. 5 ಲಕ್ಷ ರೂ.ಗೂ ಅಧಿಕ ಮೌಲ್ಯದ ಬೆಳೆ ಹಾನಿ ಆಗಿದೆ ಎಂದು ರೈತ ಜಗದೀಶ ಸವಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.