ಸುಪ್ರಸಿದ್ಧ ಶ್ರೀ ಗವಿಸಿದ್ದೇಶ್ವರ ಜಾತ್ರೆ: ಲಕ್ಷಾಂತರ ಭಕ್ತರಿಗೆ ಬಿಸಿ ಬಿಸಿ ಮಿರ್ಚಿ ತಯಾರಿ! - ಶ್ರೀ ಗವಿಸಿದ್ದೇಶ್ವರ ಜಾತ್ರೆ
ಕೊಪ್ಪಳ: ಸುಪ್ರಸಿದ್ಧ ಶ್ರೀ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರಿಗೆ ಉತ್ತರ ಕರ್ನಾಟಕ ಶೈಲಿಯ ಪುಷ್ಕಳ ಪ್ರಸಾದ ಭೋಜನ ಬಡಿಸಲಾಗುತ್ತದೆ. ಜಾತ್ರೆಯ ಎರಡನೇ ದಿನವಾದ ಇಂದು ಪ್ರಸಾದಲ್ಲಿ ಬಿಸಿಬಿಸಿ ಮಿರ್ಚಿಯನ್ನು ಸಹ ಬಡಿಸಲಾಗುತ್ತದೆ. ಇಂದು ಬೆಳಗ್ಗೆಯಿಂದಲೇ ನೂರಾರು ಬಾಣಸಿಗರು ಮಿರ್ಚಿ ತಯಾರಿಸುತ್ತಿದ್ದಾರೆ. ಇಂದಿನ ಪ್ರಸಾದದಲ್ಲಿ ಬಡಿಸಲು ಲಕ್ಷಾಂತರ ಮಿರ್ಚಿಗಳು ರೆಡಿಯಾಗುತ್ತಿದ್ದು, ಮಿರ್ಚಿ ತಯರಾಗುತ್ತಿರುವ ಪಾಕಶಾಲೆಯಲ್ಲಿ ನಮ್ಮ ಕೊಪ್ಪಳ ಪ್ರತಿನಿಧಿ ನೀಡಿರುವ ವಾಕ್ ಥ್ರೂ ಇಲ್ಲಿದೆ..