ಮಹಿಳಾ ದಿನಾಚರಣೆಯಂದು ತುಪ್ಪದ ಬೆಡಗಿ ಭಾವನಾತ್ಮಕ ಮಾತು - Ragini
ಬೆಂಗಳೂರು: ತನ್ನ ಗ್ಲ್ಯಾಮರ್ನಿಂದಲೇ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ ನಟಿ ರಾಗಿಣಿ ದ್ವಿವೇದಿ. ಕಳೆದ ವರ್ಷ ನಡೆದ ಕಹಿ ಘಟನೆಗಳ ಬಳಿಕ ಸದ್ಯ ಕುಟುಂಬದ ಜೊತೆ ಕಾಲ ಕಳೆಯುತ್ತಿರುವ ತುಪ್ಪದ ಬೆಡಗಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಮಹಿಳಾ ದಿನಾಚರಣೆಯಂದು ರಾಗಿಣಿ ದ್ವಿವೇದಿ ಆರ್ಡಿ ಹೆಸರಿನ ಯೂಟ್ಯೂಬ್ ಚಾನೆಲ್ ಹುಟ್ಟು ಹಾಕಿದ್ದಾರೆ. ಈ ಮಹಿಳಾ ವಿಶೇಷ ದಿನದಂದು ರಾಗಿಣಿ ದ್ವಿವೇದಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅನ್ಯಾಯ ಹಾಗೂ ಶೋಷಣೆ ಬಗ್ಗೆ ತಮ್ಮದೇ ಶೈಲಿಯಲ್ಲಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಸಮಾಜದಲ್ಲಿ ನಾನು ಈ ಸ್ಥಾನಕ್ಕೆ ಬರೋದಿಕ್ಕೆ ಸಾಕಷ್ಟು ಫೈಟ್ ಮಾಡಿದೀನಿ. ಮೊದಲು ನಿಮ್ಮ ಬಗ್ಗೆ ನಿಮಗೆ ಗೌರವವಿರಬೇಕು. ಆಮೇಲೆ ಬೇರೆಯವರ ಬಗ್ಗೆ ಯೋಚನೆ ಮಾಡಬೇಕು. ಯಾಕೆ ಹೆಣ್ಣು ಮಕ್ಕಳನ್ನ ಟಾರ್ಗೆಟ್ ಮಾಡ್ತಾರೆ ಎಂಬುದು ಪ್ರಶ್ನೆಯಾಗಿ ಕಾಡುತ್ತೆ ಎಂದಿದ್ದಾರೆ.