ಕರ್ನಾಟಕ

karnataka

ETV Bharat / videos

ಆನೇಕಲ್ ಕಡೆಗೆ ಬಂದ ಆನೆ ಹಿಂಡು : ಕಾಡಿಗಟ್ಟಿದ ಅರಣ್ಯ ಸಿಬ್ಬಂದಿ..

By

Published : Dec 19, 2020, 7:34 AM IST

ನಗರದ ದಕ್ಷಿಣಕ್ಕೆ ಇರುವ ದಟ್ಟ ಅರಣ್ಯ ಪ್ರದೇಶದಿಂದ ಆನೆಗಳ ಹಿಂಡು ಲಕ್ಷ್ಮೀಪುರ-ಬಸವನಪುರ ನಡುವೆ ಬೀಡು ಬಿಟ್ಟಿದ್ದವು. ಎಂಟು ಆನೆಗಳ ಗುಂಪು ಬುಧವಾರ ರಾತ್ರಿ ಆನೇಕಲ್ ಮುತ್ಯಾಲಮಡು ಮೇಲ್ದಂಡೆ ಕಡೆಯಿಂದ ಲಕ್ಷ್ಮೀಪುರ ಜಾಡಿನಲ್ಲಿ ಬಸವನಪುರ ಗೇಟ್ ನೀಲಗಿರಿ ತೋಪಿನತ್ತ ಹೆಜ್ಜೆ ಹಾಕಿದ್ದವು. ಮಧ್ಯಾಹ್ನದ ವೇಳೆಗೆ ಗ್ರಾಮಸ್ಥರ ಕಣ್ಣಿಗೆ ಕಂಡಿವೆ. ಈ ಸುದ್ದಿ ಅರಣ್ಯಾಧಿಕಾರಿಗಳಿಗೆ ತಿಳಿದ ತಕ್ಷಣ ರಾತ್ರಿವರೆಗೂ ಪಟಾಕಿ ಸಿಡಿಸುವುದರ ಮೂಲಕ ಆನೆಗಳ ಹಿಂಡನ್ನ ಕಾಡಿಗಟ್ಟುವಲ್ಲಿ ಶ್ರಮಪಟ್ಟಿದ್ದರು. ಆದರೆ, ಸುತ್ತಲ ಗ್ರಾಮಸ್ಥರ ಆರ್ಭಟಕ್ಕೆ ಆನೆಗಳು ಗಾಬರಿಗೊಂಡು ಒಂದೆಡೆಯಿಂದ ಮತ್ತೊಂದೆಡೆ ಅಲೆದಾಟ ಆರಂಭಿಸಿದ್ದವು. ಕೊನೆಗೆ ಬಸವನಪುರ ಮುಖ್ಯ ರಸ್ತೆಯನ್ನು ರಾತ್ರಿ 7.30ಕ್ಕೆ ದಾಟಿ ಸದ್ದಿಲ್ಲದೆ ಕಾಡಿನತ್ತ ಹೆಜ್ಜೆ ಹಾಕಿವೆ.

ABOUT THE AUTHOR

...view details