ಮೂಡಿಗೆರೆಯಲ್ಲಿ ಮಹಾಮಳೆಯ ಎಫೆಕ್ಟ್ ; ಅಕ್ಷರಶಃ ನಲುಗಿದ ಜನರ ಬದುಕು - ಕಾಫೀ ತೋಟ ಹಾಗೂ ಅಡಿಕೆ ತೋಟ ನಾಶ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಸುಂದರ ಬೈಲು ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಬಾರಿ ಅನಾಹುತಗಳು ಸಂಭವಿಸಿದ್ದು, ನಿರಂತರ ಮಳೆಯಿಂದಾಗಿ ಸಂಪೂರ್ಣವಾಗಿ ಕಾಫೀ ತೋಟ ಹಾಗೂ ಅಡಿಕೆ ತೋಟ ಕೊಚ್ಚಿ ಹೋಗಿದೆ. ಎಲ್ಲವನ್ನು ಕಳೆದುಕೊಂಡಿರುವ ಗ್ರಾಮಸ್ಥರು ಇದೀಗ ಕಂಗಾಲಾಗಿದ್ದು, ಮುಂದಿನ ಬದುಕನ್ನು ನೆನೆದು ಭಯಭೀತರಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ.