ಟಿಪ್ಪು ಹೆಸರಲ್ಲಿ ರಾಜಕೀಯ ಸರಿಯಲ್ಲ: ಸರ್ಕಾರದ ವಿರುದ್ಧ ಎಸ್ಡಿಪಿಐ ಕಿಡಿ - latest shimoga news
ರಾಜ್ಯದಲ್ಲಿ ನೆರೆ ಬಂದು ಜನರು ಬೀದಿ ಬದಿಯಲ್ಲಿ ವಾಸಿಸುತ್ತಿರುವಾಗ ರಾಜ್ಯ ಸರ್ಕಾರ ಅತ್ತ ಗಮನ ಹರಿಸುವುದನ್ನ ಬಿಟ್ಟು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಟಿಪ್ಪುವಿನ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವುದು ಸರಿ ಅಲ್ಲವೆಂದು ಎಸ್ಡಿಪಿಐ ಜಿಲ್ಲಾಧ್ಯಕ್ಷ ಶಫಿವುಲ್ಲಾ ವಾಗ್ದಾಳಿ ನಡೆಸಿದ್ದಾರೆ. ಟಿಪ್ಪುವಿನ ಜೀವನಚರಿತ್ರೆ ಮತ್ತು ಸಾಧನೆಯನ್ನು ಪಠ್ಯ ಪುಸ್ತಕದಿಂದ ತೆಗೆಯುತ್ತೇವೆ ಎನ್ನುವ ಮುಖ್ಯಮಂತ್ರಿ ಹೇಳಿಕೆಯನ್ನು ಅವರು ಖಂಡಿಸಿದರು. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಅಲ್ಪಸಂಖ್ಯಾತರು ಹಾಗೂ ದಲಿತರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಆರೋಪಿಸಿದರು. ಇನ್ನು ನಾಳೆಯಿಂದ ಒಂದು ತಿಂಗಳು ಕಾಲ ಸದಸ್ಯತ್ವ ಅಭಿಯಾನವನ್ನು ಎಸ್ಡಿಪಿಐ ಹಮ್ಮಿಕೊಂಡಿದೆ ಎಂದು ಶಫಿವುಲ್ಲಾ ಇದೇ ವೇಳೆ ತಿಳಿಸಿದ್ರು.