ಕೋವಿಡ್ನಿಂದ ಗುಣಮುಖರಾದ ಹೆಡ್ ಕಾನ್ಸ್ಟೇಬಲ್: ಭವ್ಯ ಸ್ವಾಗತ ಕೊರಿದ ಡಿಸಿಪಿ ಶರಣಪ್ಪ
ಬೆಂಗಳೂರು: ನಗರದ ಹೆಣ್ಣೂರಿನ 34 ವರ್ಷದ ಹೆಡ್ ಕಾನ್ಸ್ಟೇಬಲ್ ಕರೊನಾದಿಂದ ಗುಣಮುಖರಾಗಿ ಇಂದು ಬಿಡುಗಡೆಯಾಗಿದ್ದಾರೆ. ಜೂನ್ 11 ರಂದು ಕರೊನಾ ಪಾಸಿಟಿವ್ ಹಿನ್ನಲೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಇವರು, ಕರೊನಾ ವೈರಸ್ ವಿರುದ್ದ ಹೋರಾಡಿ ಗುಣಮುಖರಾದ ಕಾರಣ ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಹಾಗೂ ಇತರೆ ಸಿಬ್ಬಂದಿ ಹೂ ಮಳೆಗರೆದು ಭವ್ಯ ಸ್ವಾಗತ ಕೋರಿ ಠಾಣೆಗೆ ಕರೆದೊಯ್ದಿದ್ದಾರೆ.