ಕ್ವಾರಂಟೈನ್ನಲ್ಲಿದ್ದವರಿಂದ ಬೇಕಾಬಿಟ್ಟಿ ಓಡಾಟ ; ಅಸಡ್ಡೆ ತೋರಿದವರಿಗೆ ಯುವಕನಿಂದ ಕ್ಲಾಸ್ - ಕಲಬುರಗಿ ಜಿಲ್ಲೆಯ ಸೇಡಂ
ಸೇಡಂ : ನಗರದ ಕಲಬುರ್ಗಿ ರಸ್ತೆಯಲ್ಲಿರುವ ಕ್ವಾರಂಟೈನ್ ಸೆಂಟರನಲ್ಲಿನ ಜನ ರಾಜಾರೋಷವಾಗಿ ಹೊರಗೆ ತಿರುಗಾಡುತ್ತಿರುವುದನ್ನು ಕಂಡ ಸ್ಥಳೀಯ ಯುವಕನೋರ್ವ ಅಸಡ್ಡೆ ತೋರಿದವರಿಗೆ ಕ್ಲಾಸ್ ತೆಗೆದುಕೊಂಡಿದ್ದಾನೆ. ಮನಸೋ ಇಚ್ಛೆ ಹೊರಗೆ ತಿರುಗಾಡುತ್ತಿರುವ ವಿವಿಧ ರಾಜ್ಯಗಳಿಂದ ಬಂದ ಜನರನ್ನು ಕಂಡ ಯುವಕ ಸಂತೋಷ್ ಎಂಬಾತ, ನಿಮಗ್ಯಾರು ಹೊರಗೆ ಬಿಟ್ಟಿರುವುದು, ಯಾಕೆ ಹೊರಗಡೆ ತಿರುಗಾಡುತ್ತೀರಿ, ನೀವು ಹೀಗೆಲ್ಲಾ ಅಲೆದಾಡಿದರೆ ಇಡೀ ನಗರಕ್ಕೆ ಕೊರೊನಾ ಅಂಟುತ್ತದೆ. ನಿಮ್ಮ ತಪ್ಪಿಗೆ ನಾವು ಬೆಲೆ ತೆರಬೇಕಾಗುತ್ತದೆ. ಕೂಡಲೇ ಗೇಟ್ ಬಂದ್ ಮಾಡಿ ಬೀಗ ಹಾಕಿ ಇಲ್ಲಾಂದ್ರೆ ಮೇಲಾಧಿಕಾರಿಗಳ ಗಮನಕ್ಕೆ ತರಬೇಕಾಗುತ್ತದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾನೆ..