ಚಾಲೆಂಜ್ ಮಾಡಿ ನದಿಯಲ್ಲಿ ಈಜಲು ಹೋದ ಯುವಕ ನಾಪತ್ತೆ: ಲೈವ್ ವಿಡಿಯೋ - ಯುವಕ ನೀರಿನಲ್ಲಿ ಮುಳುಗಿ ನಾಪತ್ತೆ
ಮೈಸೂರು: ಉಕ್ಕಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ನಂಜನಗೂಡಿನ ರೈಲ್ವೆ ಸೇತುವೆ ಬಳಿ ನಡೆದಿದೆ. ನಂಜನಗೂಡಿನ ಬಳಿ ಕಪಿಲಾ ನದಿ ಉಕ್ಕಿ ಹರಿಯುತ್ತಿದ್ದು, ಇದರಿಂದ ಮೈಸೂರು ಮತ್ತು ಊಟಿ ನಡುವಿನ ಹೆದ್ದಾರಿಯನ್ನು ನಂಜನಗೂಡಿನ ಬಳಿ ಬಂದ್ ಮಾಡಿ ಭದ್ರತೆಗಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಆದರೂ ಯುವಕರ ಗುಂಪು ಪೊಲೀಸರು ಇಲ್ಲದ ವೇಳೆ ರೈಲ್ವೆ ಹೊಸ ಸೇತುವೆಯ ಬಳಿ ಈಜುವ ಸಾಹಸಕ್ಕೆ ಹೋಗಿದ್ದಾರೆ. ಇಂದು ಬೆಳಗ್ಗೆ ರೈಲ್ವೆ ಹೊಸ ಬ್ರಿಡ್ಜ್ ಬಳಿ ಬಸವಪುರದ ಯುವಕ ಸ್ಥಳೀಯ ಯುವಕರೊಂದಿಗೆ ಚಾಲೆಂಜ್ ಮಾಡಿ, ಅರ್ಧಗಂಟೆಯಲ್ಲಿ ನದಿಯಿಂದ ಏಳುತ್ತೇನೆ ಎಂದು ನದಿಗೆ ಹಾರಿದ ಯುವಕ ಇನ್ನೂ ಪತ್ತೆಯಾಗಿಲ್ಲ. ಈ ಸಂಬಂಧ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.