ಬೇವು ಹೆಚ್ಚಿದೆ, ಸಿಹಿ ತರುವ ದಿನಗಳು ಬರ್ತವೆ.. ಯುಗಾದಿ ಸಿಂಪಲ್ ಆಗಿರಲೆಂದ ಪ್ರಣೀತಾ! - Actress Pranitha
ಬೆಂಗಳೂರು : ಇಂದು ನಾಡಿನಾದ್ಯಂತ ಯುಗಾದಿ ಹಬ್ಬ. ಈ ವರ್ಷ ಸರಳವಾಗಿ ಹಬ್ಬ ಆಚರಿಸಿ ಕೊರೊನಾ ವಿರುದ್ಧ ಗೆದ್ದ ನಂತರ ಸಂಭ್ರಮದಿಂದ ಆಚರಿಸೋಣ. ಮುಂದೆ ಒಳ್ಳೆಯ ದಿನಗಳು ಬರುತ್ತವೆ. ಎಲ್ಲರೂ ಮನೆಯಲ್ಲೇ ಇರಿ. ನಾನೂ ಕೂಡ ಮನೆಯಲ್ಲಿದ್ದು ಸರಳವಾಗಿ ಹಬ್ಬ ಆಚರಿಸ್ತಿದ್ದೇನೆ. ನೀವೂ ಕೂಡ ಮನೆಯಲ್ಲಿದ್ದು ಸರಳವಾಗಿ ಯುಗಾದಿ ಹಬ್ಬ ಆಚರಿಸಿ ಎಂದು ನಟಿ ಪ್ರಣೀತಾ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಜೊತೆಗೆ ನಾಡಿನ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.