ತೇಜಸ್ವಿನಿಯವರ ಆಶೀರ್ವಾದವೂ ನನ್ನ ಮೇಲಿದೆ: ತೇಜಸ್ವಿ ಸೂರ್ಯ - ಬಿಜೆಪಿ ಟಿಕೆಟ್
ಬಿಜೆಪಿಯಲ್ಲಿ ಮಾತ್ರ ನಮ್ಮಂತಹ ಸಾಮಾನ್ಯ ಕಾರ್ಯಕರ್ತನಿಗೂ ಹೆಚ್ಚಿನ ಸೇವೆಗೆ ಅವಕಾಶ ಸಿಗುತ್ತದೆ... ದಿ. ಅನಂತಕುಮಾರ್ ಅವರ ಕ್ಷೇತ್ರದಲ್ಲಿ ನನಗೆ ಸ್ಪರ್ಧೆಗೆ ಅವಕಾಶ ಸಿಕ್ಕಿರುವುದು ತುಂಬಾ ಸಂತಸವಾಗಿದ್ದು, ನನಗೆ ಮಾತುಗಳೇ ಬರುತ್ತಿಲ್ಲ.. ಮೊದಲನೆಯದಾಗಿ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿಯವರ ಆಶೀರ್ವಾದ ಕೇಳುತ್ತೇನೆ.. ಹೀಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆಯಾದ ತೇಜಸ್ವಿಸೂರ್ಯ ಅವರು ಈಟಿವಿ ಭಾರತ ಜೊತೆ ಮಾತನಾಡಿ ತಮ್ಮ ಸಂತಸ ಹಂಚಿಕೊಂಡರು