ಹೊಸಪೇಟೆಯಲ್ಲಿ ಕರಡಿ ದಾಳಿ : ಇಬ್ಬರ ತಲೆಗೆ ಗಂಭೀರ ಗಾಯ - ಬಳ್ಳಾರಿ ಜಿಲ್ಲೆಯ ಹೊಸಪೇಟೆ
ಹೊಸಪೇಟೆ : ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಪಟ್ಟಣದ 9ನೇ ವಾರ್ಡ್‌ನ ಕೆರೆಕಾವಲರಟ್ಟಿ ಪ್ರದೇಶದಲ್ಲಿ ಇಬ್ಬರ ಮೇಲೆ ಕರಡಿ ದಾಳಿ ಮಾಡಿ ತಲೆಗೆ ಗಂಭೀರ ಗಾಯಗೊಳಿಸಿದೆ. ಕರಡಿಯು ಮೊದಲು ನಾಗರಾಜ್ ಎಂಬುವರ ಮೇಲೆ ದಾಳಿ ಮಾಡಿದ ನಂತರ ಕರಡಿಯಿಂದ ನಾಗರಾಜ್ ಬಿಡಿಸಲು ಹೋದ ವೆಂಕಟೇಶ್ ಎಂಬ ವ್ಯಕ್ತಿಯ ಮೇಲೂ ಸಹ ಎರಗಿದೆ. ಇಬ್ಬರಿಗೂ ತಲೆ ಭಾಗ ಹಾಗೂ ಮೈ ಪರಚಿ ಗಾಯಗೊಳಿಸಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.