ಸಾಮಾಜಿಕ ಅಂತರ ಮರೆತ ಗೃಹ ಸಚಿವರು! - ಸಾಮಾಜಿಕ ಅಂತರ
ಚಿತ್ರದುರ್ಗ: ಜನಸಾಮಾನ್ಯರ ಮೇಲೆ ಹೇರಿರುವ ಕೊರೊನಾ ನಿಯಮಗಳು ಜನಪ್ರತಿನಿಧಿಗಳಿಗೆ ಅನ್ವಯಿಸುವುದಿಲ್ವಾ ಎಂಬ ಅನುಮಾನ ಕಾಡತೊಡಗಿದೆ. ಸಾಮಾಜಿಕ ಅಂತರ ಕಾಪಾಡುವಲ್ಲಿ ಸಚಿವರು ಎಡುವುತ್ತಿದ್ದು, ಸದಾ ಸುದ್ದಿಯಲ್ಲಿರುತ್ತಿದ್ದಾರೆ. ಇದೀಗ ಗೃಹ ಸಚಿವರ ಸರದಿ. ಬಿಜೆಪಿ ಕಚೇರಿಗೆ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಸಾಮಾಜಿಕ ಅಂತರ ಮರೆತಿದ್ದಾರೆ. ಗೃಹಸಚಿವರು ಆಗಮಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಮುಗಿಬಿದ್ದಿದ್ದಾರೆ. ಚಿತ್ರದುರ್ಗ ನಗರದ ಕೆಳಗೋಟೆ ಬಡಾವಣೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಮೂಕ ಪ್ರೇಕ್ಷಕರಂತಿದ್ದರು.