ಡ್ರಗ್ಸ್ ಜಾಲದ ಹಿಂದೆ ಯಾರೇ ಇದ್ದರೂ ಬಿಡಬಾರದು: ಶಾಸಕ ಅಪ್ಪಚ್ಚು ರಂಜನ್ ಆಗ್ರಹ..! - ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ
ಕೊಡಗು: ಡ್ರಗ್ಸ್ ಜಾಲದ ಹಿಂದೆ ಕನ್ನಡ ಸಿನಿಮಾ ನಟ, ನಟಿಯರು, ರಾಜಕಾರಣಿಗಳು ಯಾರೇ ಇದ್ದರೂ ತಕ್ಕ ಶಿಕ್ಷೆಯಾಗಬೇಕು ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಆಗ್ರಹಿಸಿದ್ದಾರೆ. ಡ್ರಗ್ಸ್‌ನಿಂದ ನಮಗೆ ಉಳಿಗಾಲವಿಲ್ಲ. 10 ವರ್ಷಗಳ ಹಿಂದೆ ಪಿಟಿಷನ್ ಕಮಿಟಿಯಲ್ಲಿ ನಾನೂ ಇದ್ದೆ. ಅಂದು ಡ್ರಗ್ಸ್ ತಡೆಗಟ್ಟುವುದು ಹೇಗೆ, ಶಾಲಾ-ಕಾಲೇಜು ಆವರಣಗಳ ಎದುರು ಸಿಸಿಟಿವಿ ಅಳವಡಿಸುವುದು ಸೇರಿದಂತೆ ಹಲವು ಶಿಫಾರಸ್ಸುಗಳನ್ನು ಮಾಡಿದ್ದೆವು. ದೇಶದ ಅಭಿವೃದ್ಧಿಗೆ ಮಾರಕವಾಗಿರುವ ದಂಗೆಯನ್ನು ಮಟ್ಟಹಾಕಲು ಎಲ್ಲರೂ ಶ್ರಮಿಸಬೇಕು ಎಂದಿದ್ದಾರೆ.