ಒಂದೇ ದಿನ ಬಿಡುವು ಕೊಟ್ಟು ಮತ್ತೆ ಆರ್ಭಟ ಆರಂಭಿಸಿದ ವರುಣ! - ಕೊಡಗು
ಕೊಡಗು: ಜಿಲ್ಲೆಯಲ್ಲಿ ಒಂದು ದಿನ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಚುರುಕುಗೊಂಡಿರುವುದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ಭಾನುವಾರ ಇಡೀ ದಿನ ಬಿಡುವು ಕೊಟ್ಟಿದ್ದ ವರುಣ ಇಂದು ಬೆಳಗ್ಗೆಯಿಂದಲೇ ಆರ್ಭಟಿಸುತ್ತಿದ್ದಾನೆ. ಒಂದು ದಿನ ಬಿಡುವು ಕೊಟ್ಟಿದ್ದರಿಂದ ಜಲಾವೃತ ಪ್ರದೇಶಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ವಾಹನಗಳ ಸಂಚಾರಕ್ಕೆ ರಸ್ತೆಗಳು ಮುಕ್ತವಾಗಿದ್ದವು. ಆದರೆ ಇಂದು ಮತ್ತೆ ಆರ್ಭಟ ಶುರುವಾಗಿದೆ. ಮತ್ತೊಂದೆಡೆ ವಿರಾಜಪೇಟೆ ತಾಲೂಕಿನ ತೋರಾ ಗ್ರಾಮದಲ್ಲಿ ಕಣ್ಮರೆ ಆಗಿದ್ದವರ ಹುಡುಕಾಟ ಭರದಿಂದ ಸಾಗಿದ್ದು, ಪರಿಹಾರ ಕೇಂದ್ರಗಳಲ್ಲಿ ನಿರಾಶ್ರಿತರಿಗೆ ಆಶ್ರಯ ನೀಡಲಾಗಿದೆ.