ಕರ್ನಾಟಕ

karnataka

ETV Bharat / videos

ಮತದಾನ ಜಾಗೃತಿ... ಬಾನಂಗಳದಲ್ಲಿ ಹಾರಾಡಿದ ವಿಶೇಷಚೇತನರು - ಮತದಾನ ಜಾಗೃತಿ

By

Published : Apr 15, 2019, 1:53 PM IST

ಮತದಾನ ಜಾಗೃತಿ ಅಂಗವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಆಯೋಜಿಸಿದ್ಧ ಪ್ಯಾರಾ ಮೋಟಾರ್ ಗ್ಲೈಡಿಂಗ್​ನಲ್ಲಿ ಆಯ್ದ ವಿಶೇಷ ಚೇತನರು ಕಾರವಾರದ ಬಳಿ ಬಾನಂಗಳದಲ್ಲಿ ಹಾರಾಡಿ ಹೊಸ ಅನುಭವ ತಮ್ಮದಾಗಿಸಿಕೊಂಡರು. ವಿಶೇಷವಾಗಿ ದಿವ್ಯಾಂಗ ಮತದಾರರಿಗಾಗಿಯೇ ಹಮ್ಮಿಕೊಂಡಿದ್ದ ಪ್ಯಾರಾ ಮೋಟಾರ್ ಗ್ಲೈಡಿಂಗ್ ಕಾರ್ಯಕ್ರಮದಲ್ಲಿ ಕಾರವಾರ ಸೇರಿದಂತೆ ವಿವಿಧ ತಾಲೂಕಿನ ವಿಕಲಚೇತನರು ಆಗಮಿಸಿದ್ದರು. ಈ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ. ಕೆ.ಹರೀಶ್ ಕುಮಾರ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಎಂ.ರೋಶನ್ ಚಾಲನೆ ನೀಡಿದರು. ಈ ಮೂಲಕ ವಿಕಲಚೇತನರಲ್ಲಿ ಹಾಗೂ ಎಲ್ಲ ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ABOUT THE AUTHOR

...view details