ಐಪಿಎಲ್ನಲ್ಲಿ ಯಾವುದೂ ಸುಲಭವಲ್ಲ: ಮುಂಬೈ ವಿರುದ್ಧ ಸೋತ ನಂತರ ರಿಕ್ಕಿ ಪಾಂಟಿಂಗ್ ಹೇಳಿಕೆ - IPL 2020 match updates
ನವೆಂಬರ್ 5 ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ -2020ಯ ಮೊದಲ ಅರ್ಹತಾ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧ ಮುಂಬೈ ಇಂಡಿಯನ್ಸ್ (ಎಂಐ) 57 ರನ್ ಅಂತರದಲ್ಲಿ ಸುಲಭ ಜಯ ಸಾಧಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಕ್ಯಾಪಿಟಲ್ಸ್ ಕೋಚ್ ರಿಕ್ಕಿ ಪಾಂಟಿಂಗ್, ಐಪಿಎಲ್ನಲ್ಲಿ ಮಾರ್ಕಸ್ ಸ್ಟೋಯ್ನಿಸ್ ತಾವು ಎಂತಹ ಆಟಗಾರ ಎಂಬುದನ್ನು ನಿರೂಪಿಸಿದ್ದಾರೆ. ಅಕ್ಸರ್ ಪಟೇಲ್ ಕೂಡ ತುಂಬಾ ಚೆನ್ನಾಗಿ ಬ್ಯಾಟಿಂಗ್ ಮಾಡಿದ್ರು. ನಮ್ಮ ಪ್ಲಾನ್ ಸರಿಯಾಗಿಯೇ ಇತ್ತು. ಆದರೆ, ಮೈದಾನದಲ್ಲಿ ನಾವು ಅಂದುಕೊಂಡಂತೆ ಆಡಲು ಸಾಧ್ಯವಾಗಿಲ್ಲ. ಕಗಿಸೊ ರಬಾಡ ಮತ್ತು ಅನ್ರಿಕ್ ನೋಕಿಯೇ ಇಡೀ ಟೂರ್ನಿಯಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ರು. ಆದ್ರೆ ಐಪಿಎಲ್ ಮ್ಯಾಚ್ ನಲ್ಲಿ ಯಾವುದೂ ಸುಲಭವಲ್ಲ, ಒಂದು ಬಾಲ್ ಅನ್ನು ಕೂಡ ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ರಿಕ್ಕಿ ಪಾಟಿಂಗ್ ಹೇಳಿದ್ದಾರೆ.