MR ಸಿನಿಮಾ ಮಾಡಲ್ಲ, DR ಮಾಡ್ತೇನೆ ಅಂದ್ರು ರವಿ ಶ್ರೀವತ್ಸ - ನಿರ್ದೇಶಕ ರವಿ ಶ್ರೀವತ್ಸ
M R ಕನ್ನಡ ಚಿತ್ರರಂಗದಲ್ಲಿ ಟೈಟಲ್ ಹಾಗೂ ಅದ್ಧೂರಿ ಫೋಟೋ ಶೂಟ್ನಿಂದಲೇ ಸಖತ್ ಸದ್ದು ಮಾಡಿದ ಸಿನಿಮಾ. ದಿವಂಗತ ಮಾಜಿ ಡಾನ್ ಮುತ್ತಪ್ಪ ರೈ ಬಗ್ಗೆ ಸಿನಿಮಾ ಮಾಡುತ್ತಿರುವ ಬಗ್ಗೆ ಮುತ್ತಪ್ಪ ರೈ ಕುಟುಂಬ, ರೈ ಆಪ್ತರಾಗಿರುವ ನಿರ್ಮಾಪಕ ಪದ್ಮನಾಭ್ ಸೇರಿದಂತೆ ಹಲವರು ಈ ಸಿನಿಮಾ ಮಾಡುವುದು ಬೇಡ ಎಂದಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ರವಿ ಶ್ರೀವತ್ಸ ಮತ್ತು ಚಿತ್ರತಂಡ, ಈ ಚಿತ್ರದಿಂದ ಹಿಂದೆ ಸರಿದಿರುವುದಾಗಿ ತಿಳಿಸಿದೆ.