ಚಾವಟಿ ಏಟು ತಿಂದ ಭಾಯಿಜಾನ್ ಸಲ್ಮಾನ್ ಖಾನ್ ! - ಭಜರಂಗಿ ಭಾಯ್ಜಾನ್
ಬಾಲಿವುಡ್ ನಟ ಸಲ್ಮಾನ್ ಖಾನ್ ಚಾವಟಿಯಿಂದ ಹೊಡೆದುಕೊಂಡಿದ್ದಾರೆ. ದಬಾಂಗ್ 3 ಶೂಟಿಂಗ್ ವೇಳೆ ದುರುಗ ಮುರುಗ ಸಮುದಾಯವರನ್ನು ಸಲ್ಲು ಭೇಟಿಯಾಗಿದ್ದರು. ಈ ವೇಳೆ ಅವರ ಸಂಪ್ರದಾಯದಂತೆ ಭಜರಂಗಿ ಭಾಯಿಜಾನ್ ಕೂಡ ಚಾವಟಿ ತೆಗೆದುಕೊಂಡು ತಮ್ಮನ್ನೇ ಜೋರಾಗಿ ಹೊಡೆದುಕೊಂಡಿದ್ದಾರೆ. ಈ ವಿಡಿಯೋ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿ, ಅವರ ನೋವನ್ನು ನಾವು ಹಂಚಿಕೊಳ್ಳುವುದರಲ್ಲಿ ಒಂದು ರೀತಿಯಲ್ಲಿ ಸಂತೋಷ ಇದೆ ಎಂದಿದ್ದಾರೆ.