ಕರ್ನಾಟಕ

karnataka

ಪೊಲೀಸ್​ ಠಾಣೆ ಮುಂದೆ ಸೇರಿರುವ ಗ್ರಾಮಸ್ಥರು

ETV Bharat / videos

ರಾತ್ರಿ ಮನೆಗೆ ನುಗ್ಗಿ, ಪಿಸ್ತೂಲ್​ ತೋರಿಸಿ ಯುವತಿಯ ಅಪಹರಣ! - ಸಬ್ ಇನ್ಸ್‌ಪೆಕ್ಟರ್ ಬಲ್ಜಿಂದರ್ ಸಿಂಗ್

By

Published : Feb 16, 2023, 5:38 PM IST

ತರ್ನ್ ತರಣ್(ಪಂಜಾಬ್​): ಮೂವರು ಯುವಕರು ನಿನ್ನೆ ರಾತ್ರಿ ಮನೆಯೊಂದಕ್ಕೆ ನುಗ್ಗಿ ಪಿಸ್ತೂಲ್​ ತೋರಿಸಿ ಮನೆಯವರ ಮೇಲೆ ಹಲ್ಲೆ ನಡೆಸಿ 18 ವರ್ಷದ ಯುವತಿಯನ್ನು ಅಪಹರಿಸಿದ ಘಟನೆ ಜಿಲ್ಲೆಯ ಗಡಿಭಾಗದ ಪಹುವಿಂದ್ ಗ್ರಾಮದಲ್ಲಿ ನಡೆದಿದೆ. ಮನೆಗೆ ನುಗ್ಗಿದ ದುಷ್ಕರ್ಮಿಗಳು ಮೊದಲಿಗೆ ಯುವತಿಯ ತಾಯಿ, ಸಹೋದರಿ, ಸಹೋದರನಿಗೆ ಹೊಡೆದಿದ್ದಾರೆ. ನಂತರ ತಾಯಿಗೆ ಪಿಸ್ತೂಲ್​ ತೋರಿಸಿ ಯುವತಿಯನ್ನು ಕಿಡ್ನಾಪ್ ಮಾಡಿದ್ದಾರೆ. ಇಡೀ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಯುವತಿಯ ತಾಯಿ ರಾಣಿ ಮಾತನಾಡಿ, ಪತಿ ಶಿಂದಾ ಸಿಂಗ್​ ಕೆಲಸದ ನಿಮಿತ್ತ ಹೊರ ಹೋಗಿದ್ದರು. ಮನೆಯಲ್ಲಿ ನಾನು ಹಿರಿಮಗಳು, ಕಿರಿಮಗಳು ಹಾಗೂ ಮಗ ಇದ್ದೆವು. ಈ ವೇಳೆ ಏಕಾಏಕಿ ಕೆಲ ಯುವಕರು ಮನೆಗೆ ನುಗ್ಗಿ ನನ್ನ ಮೇಲೆ ದಾಳಿ ಮಾಡಿದರು. ಕೋಣೆಯಲ್ಲಿ ಕುಳಿತಿದ್ದ ಮಗಳ ತಲೆಗೆ ಹಾಕಿ ಸ್ಟಿಕ್​ನಿಂದ ಹೊಡೆದು, ಅವಳನ್ನು ಕರೆದುಕೊಂಡು ಹೋದರು. ಸಹೋದರಿ ಪ್ರತಿಭಟಿಸಿದಾಗ ಯುವಕರು ಪಿಸ್ತೂಲ್​ ತೋರಿಸಿ ಗಲಾಟೆ ಮಾಡಿದರೆ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದರು ಎಂದು ವಿವರಿಸಿದರು.

ಯುವತಿಯ ತಂದೆ ಶಿಂದಾ ಸಿಂಗ್​ ಮಾತನಾಡಿ, ಜುಲೈ 2022 ರಲ್ಲಿ ತನ್ನ ಅತ್ತಿಗೆಯ ಸಹೋದರ ತನ್ನ ಮಗಳನ್ನು ಕರೆದುಕೊಂಡು ಹೋಗಿದ್ದ. ಈ ಬಗ್ಗೆ ಭಿಖಿವಿಂಡ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ಪೊಲೀಸರು ಆತನನ್ನು ಬಂಧಿಸಲಿಲ್ಲ. ಈ ಕಾರಣದಿಂದ ಇಂದು ಮನೆಗೆ ನುಗ್ಗಿ ಮನೆಯವರನ್ನು ಥಳಿಸಿ ಮಗಳನ್ನು ಅಪಹರಿಸಿದ್ದಾನೆ ಎಂದು ದೂರಿದ್ದಾರೆ. ಆದಷ್ಟು ಬೇಗ ಆರೋಪಿಯನ್ನು ಬಂಧಿಸಿ ಮಗಳನ್ನು ವಾಪಸ್ ಕರೆತರುವಂತೆ ಸಂತ್ರಸ್ತ ಬಾಲಕಿಯ ಕುಟುಂಬದವರು ಪೊಲೀಸರನ್ನು ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಭಿಖಿವಿಂಡ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಬಲ್ಜಿಂದರ್ ಸಿಂಗ್, 6 ತಿಂಗಳ ಹಿಂದೆ ಸಲ್ಮಾನ್ ಎಂಬ ವ್ಯಕ್ತಿ ಯುವತಿಯನ್ನು ಅಪಹರಿಸಿದ್ದು, ಈ ಬಗ್ಗೆ ಭಿಖಿವಿಂಡ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ಇಂದು ಮತ್ತೆ ಸಲ್ಮಾನ್​ ಯುವತಿಯನ್ನು ಅಪಹರಿಸಿದ್ದಾನೆ. ಭಿಖಿವಿಂಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ನೋಡಿ:ರಾಗಿ ಖರೀದಿ ಕೇಂದ್ರದಲ್ಲಿ ಅಗ್ನಿ ಅವಘಡ: 3 ಲಕ್ಷ ರೂ. ಮೌಲ್ಯದ ಬೆಳೆ ಬೆಂಕಿಗಾಹುತಿ

ABOUT THE AUTHOR

...view details