ಆಸ್ಪತ್ರೆಯಲ್ಲಿ ಸಿಗದ ಆಂಬ್ಯುಲೆನ್ಸ್.. ಸಹೋದರಿಯ ಶವ ಬೈಕ್‌ನಲ್ಲಿ ಸಾಗಿಸಿದ ಯುವಕ - ಇಮ್ಮರ್ಶನ್ ರಾಡ್
Published : Nov 8, 2023, 10:54 PM IST
ಔರೈಯಾ (ಉತ್ತರ ಪ್ರದೇಶ) : ಆಸ್ಪತ್ರೆಯ ಸಿಬ್ಬಂದಿ ಆಂಬ್ಯುಲೆನ್ಸ್ ನೀಡದ ಕಾರಣ ಯುವಕನೊಬ್ಬ ತನ್ನ ಸಹೋದರಿಯ ಮೃತದೇಹವನ್ನು ಮೋಟಾರ್ ಸೈಕಲ್‌ನಲ್ಲಿ ಸಾಗಿಸಲು ಮುಂದಾದ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ನಡೆದಿದೆ. ಬುಧವಾರ ಬೆಳಗ್ಗೆ ಬಿದುನಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ (ಸಿಎಚ್‌ಸಿ) ಈ ಘಟನೆ ನಡೆದಿದೆ.
ಮೃತರನ್ನು ಅಂಜಲಿ (20) ಎಂದು ಗುರುತಿಸಲಾಗಿದೆ. ಆಕಸ್ಮಿಕವಾಗಿ ನೀರು ಕಾಯಿಸಲು ಬಳಸುವ ಇಮ್ಮರ್ಶನ್ ರಾಡ್ ಅನ್ನು ಸ್ಪರ್ಶಿಸಿದ ಕಾರಣ ಅವರಿಗೆ ವಿದ್ಯುತ್ ಸ್ಪರ್ಶವಾಗಿತ್ತು. ಕೂಡಲೇ ಯುವತಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದರು. ಮೃತದೇಹವನ್ನು ಮನೆಗೆ ಸಾಗಿಸಲು ಸಿಎಚ್‌ಸಿಯಲ್ಲಿನ ಯಾವುದೇ ಅಧಿಕಾರಿಗಳು ಆಂಬ್ಯುಲೆನ್ಸ್ ಸಹಾಯ ಮಾಡಿಲ್ಲ.
ಹೀಗಾಗಿ ಮೃತ ಅಂಜಲಿಯ ಅಕ್ಕ ಮತ್ತು ಸಹೋದರ ಬೈಕ್‌ನಲ್ಲಿ ಶವವಿಟ್ಟು ದುಪಟ್ಟಾದಿಂದ ಕಟ್ಟಿದ್ದಾರೆ. ತನ್ನ ಸಹೋದರಿಯ ಮೃತದೇಹವನ್ನು ಕೈಯಲ್ಲಿ ಹಿಡಿದುಕೊಂಡು ಅಳುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಮೃತಪಟ್ಟ ಮಗಳ ಅಂತ್ಯ ಸಂಸ್ಕಾರಕ್ಕೆ ತೆಗೆದುಕೊಂಡು ಹೋಗಲು ಆಂಬ್ಯುಲೆನ್ಸ್ ಸಿಗದಿದ್ದಕ್ಕೆ ಒಡಹುಟ್ಟಿದವರು ಅನಿವಾರ್ಯವಾಗಿ ಬೈಕ್ನಲ್ಲಿಯೇ ಶವ ಮನೆಗೆ ಸಾಗಿಸಿದ್ದಾರೆ.
ಇದನ್ನೂ ಓದಿ:ಪಶ್ಚಿಮ ಬಂಗಾಳದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಿಜೆಪಿ ಮುಖಂಡನ ಶವ ಪತ್ತೆ: ಟಿಎಂಸಿ ಕೈವಾಡ ಎಂದ ಕಮಲ ಪಡೆ