ಕರ್ನಾಟಕ

karnataka

ETV Bharat / videos

ಬೈಕ್​ ಟ್ಯಾಂಕ್​ ಮೇಲೆ ಯುವತಿ ಕೂರಿಸಿಕೊಂಡು ಜಾಲಿ ರೈಡ್: ಜೋಡಿ ಪೊಲೀಸ್ ವಶಕ್ಕೆ - young couple

By

Published : Dec 30, 2022, 5:36 PM IST

Updated : Feb 3, 2023, 8:37 PM IST

ವಿಶಾಖಪಟ್ಟಣ (ಆಂಧ್ರ ಪ್ರದೇಶ): ಕೆಲವು ತಿಂಗಳ ಹಿಂದೆ ಯುವಕನೋರ್ವ ಬೈಕ್​ನ ಟ್ಯಾಂಕ್​ ಮೇಲೆ ಯುವತಿಯನ್ನು ಕೂರಿಸಿಕೊಂಡು ಸವಾರಿ ಮಾಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿತ್ತು. ಇದೀಗ ಇಂಥದ್ದೆ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದ್ದು, ಸಿನಿಮಾ ಸ್ಟೈಲ್​​ನಲ್ಲಿ ಬೈಕ್‌ನ ಟ್ಯಾಂಕ್ ಮೇಲೆ ಹಿಮ್ಮುಖವಾಗಿ ಕುಳಿತ ಯುವತಿಯೊಂದಿಗೆ ಈ ಜೋಡಿ ಸವಾರಿ ಮಾಡಿರುವ ವಿಡಿಯೋ ವೈರಲ್​ ಆಗಿದೆ. ಈ ಅಪಾಯಕಾರಿ ರೈಡಿಂಗ್ ಗಮನಕ್ಕೆ ಬಂದ ನಂತರ ಜೋಡಿಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗಿದೆ. ಅಲ್ಲದೇ, ಇಬ್ಬರ ಪೋಷಕರನ್ನೂ ಠಾಣೆಗೆ ಕರೆಸಿ ಕೌನ್ಸೆಲಿಂಗ್ ಮಾಡಲಾಗಿದೆ. ವಿವಿಧ ಐಪಿಸಿ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated : Feb 3, 2023, 8:37 PM IST

ABOUT THE AUTHOR

...view details