Yoga Day: ನ್ಯೂಯಾರ್ಕ್‌ನ ವಿಶ್ವಸಂಸ್ಥೆ ಆವರಣದಲ್ಲಿ ಯೋಗ ದಿನಾಚರಣೆ: ಗಾಂಧಿ ಪ್ರತಿಮೆಗೆ ಪ್ರಧಾನಿ ಮೋದಿ ಪುಷ್ಪ ನಮನ - ಮಹಾತ್ಮಾ ಗಾಂಧಿ ಪ್ರತಿಮೆ
ನ್ಯೂಯಾರ್ಕ್ (ಅಮೆರಿಕ):ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಬುಧವಾರ ನೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಆವರಣದಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಅವರು ವಿಶ್ವಸಂಸ್ಥೆ ಆವರಣದಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.
ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಆವರಣದ ಹುಲ್ಲುಹಾಸಿನಲ್ಲಿ ಯೋಗ ಪ್ರದರ್ಶನ ಆಯೋಜಿಸಲಾಗಿದೆ. ವಿಶ್ವಸಂಸ್ಥೆ ಅಧ್ಯಕ್ಷ ಕ್ಸಾಬಾ ಕೊರೋಸಿ, ನಟ ರಿಚರ್ಡ್ ಗೆರ್, ನೂಯಾರ್ಕ್ ಸಿಟಿ ಮೇಯರ್ ಎರಿಕ್ ಆಡಮ್ಸ್, ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಸೇರಿದಂತೆ ಹಲವು ಪ್ರಮುಖರು ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದಾರೆ. ರಾಜತಾಂತ್ರಿಕರು, ಅಧಿಕಾರಿಗಳು, ಶಿಕ್ಷಣ ತಜ್ಞರು, ಆರೋಗ್ಯ ತಜ್ಞರು, ತಂತ್ರಜ್ಞರು, ಉದ್ಯಮಿಗಳು, ಕಲಾವಿದರು, ಆಧ್ಯಾತ್ಮಿಕ ನಾಯಕರು ಮತ್ತು ಯೋಗ ಸಾಧಕರು ಸೇರಿದಂತೆ ಸಮಾಜದ ಎಲ್ಲ ಕ್ಷೇತ್ರಗಳ ಗಣ್ಯರು ಸೇರಿ 180ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಅಲ್ಲದೇ, ಯೋಗದಲ್ಲಿ ಹೆಚ್ಚಿನ ಭಾರತೀಯರೂ ಸಹ ಪಾಲ್ಗೊಳ್ಳಲು ಸಾಲುಗಟ್ಟಿದ್ದ ದೃಶ್ಯಗಳು ಕಂಡುಬಂತು.
ಇದನ್ನೂ ಓದಿ:Video: ಉಪರಾಷ್ಟ್ರಪತಿ ಧನಕರ್ ಸೇರಿ ಗಣ್ಯರಿಂದ ಯೋಗ ದಿನ ಆಚರಣೆ..